
ಕರ್ನಾಟಕ ರತ್ನ,ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ? ಹಿಂದಿನಿಂದ ಇಂದಿನವರೆಗಿನ ಎಲ್ಲ ಚಲನ ಚಿತ್ರ ಪ್ರೇಮಿಗಳ ಆರಾಧ್ಯ ದೈವ ಎಂದರು ತಪ್ಪಾಗದು! ಆಡು ಮುಟ್ಟದ ಸೊಪ್ಪಿಲ್ಲ ಸಾಹಸಿಂಹ ಮಾಡದ ಪಾತ್ರವಿಲ್ಲ,ಕನ್ನಡ ಮಾತ್ರವಲ್ಲ ಬೇರೆ ಭಾಷೆಯ ನಟರು ಕೂಡ ಹೆಮ್ಮೆಯಿಂದ ಹೊಗಳಿದ, ಗೌರವಿಸಿದ,ಪ್ರೀತಿಸಿದ ನಟ ಕನ್ನಡ ಚಿತ್ರರಂಗದ ಕರ್ಣ ವಿಷ್ಣು ದಾದಾ ಅವರು.
kodak ಕ್ಯಾಮೆರಾ ಅವರು ಒಮ್ಮೆ ಮಾಡಿದ ಅಧ್ಯಯನದ ಪ್ರಕಾರ ಎಲ್ಲ ಕಡೆಯಿಂದ ಸುಂದರವಾಗಿ ಕಾಣುವ ಏಕೈಕ ನಟ ಎನ್ನುವ ಹೆಗ್ಗಳಿಕೆ ನಮ್ಮ ವಿಷ್ಣುವರ್ಧನ ಅವರದ್ದು. ಹೀಗೆ ರೂಪ,ಗುಣ ಹಾಗೂ ಪ್ರತಿಭೆ,ಅಭಿನಯ ಎಲ್ಲದರಲ್ಲುವು ಎತ್ತಿದ ಕೈ ಅಂದರೆ ನಮ್ಮ ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಡಾ ವಿಷುವರ್ಧನ್ ಮಾತ್ರ!
ವಿಷ್ಣುದಾದ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ಚಿತ್ರವೆಂದರೆ ಅದು “ಒಂದೇ ರೂಪ , ಎರಡು ಗುಣ” ಈ ಚಿತ್ರವೂ 1975 ರಲ್ಲಿ ಬಿಡುಗಡೆ ಕಂಡು ಅತ್ಯಂತ ಜನಮನ್ನಣೆ ಪಡೆದಿತ್ತು.ಈ ಚಿತ್ರದ ಮೂಲಕ ವಿಷುವರ್ಧನ್ ಅವರು ದ್ವಿಪಾತ್ರ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದರು.ಇದರ ನಂತರ ಕಾಳಿಂಗ,ವಿಜಯ್ ವಿಕ್ರಂ,ಶಿವಶಂಕರ, ಲಯನ್ ಜಗಪತಿ ರಾವ್,ಅಪ್ಪಾಜಿ,ಸಿಂಹಾದ್ರಿಯ ಸಿಂಹ,ಸೂರ್ಯವಂಶ,ದಿಗ್ಗಜರು ಹೀಗೆ ಹಲವಾರು ಸಿನೆಮಾಗಳಲ್ಲಿ ದ್ವಿಪಾತ್ರ ಮಾಡಿ ಸೈ ಎನಿಸಿಕೊಂಡರು.ಹಾಗೆ ತ್ರಿಪಾತ್ರದಲ್ಲಿ ಕೂಡ ಅಭಿನಯ ಭಾರ್ಗವ ತಮ್ಮ ಪರಾಕ್ರಮ ಮೆರೆದು ಅಭಿಮಾನಿಗಳ ಹೃದಯ ಸಿಂಹಾಸನ ಅಲಂಕರಿಸಿದರು.
ಇಲ್ಲಿಯವರೆಗೆ ಸುಮಾರು 220 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ತಮ್ಮ ವಿಶಿಷ್ಟ ಅಭಿನಯ,ನೈಜತೆ,ತಮ್ಮ ಸಿನೆಮಾಗಳಲ್ಲಿ ಅವರು ಮಾಡುವ ನಿಜವಾದ ಸಾಹಸಗಳು ಅವರನ್ನು ಎಲ್ಲರಿಗಿಂತ ವಿಭಿನ್ನ ವಿಶೇಷ ನಟರಾಗಿಸಿತು. ಇಲ್ಲಿಯವರೆಗೆ ರಾಜಕುಮಾರ್,ಶಂಕರನಾಗ್,ಅಂಬರೀಷ್,ಶಿವರಾಜಕುಮಾರ್ ಸೇರಿದಂರೆ ಹಲವಾರು ಕನ್ನಡ ಚಿತ್ರ ರಂಗದ ನಟರು ದ್ವಿಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಆದರೆ ಇಲ್ಲಿವರೆಗಿನ ಕನ್ನಡ ಚಿತ್ರರಂಗದ ಎಲ್ಲ ಸಿನಿಮಾಗಳು ಹಾಗೂ ಎಲ್ಲರ ದ್ವಿಪಾತ್ರಗಳನ್ನ ಅವಲೋಕಿಸಿದಾಗ ಅಭಿನಯ ಭಾರ್ಗವ ವಿಷ್ಣುವರ್ಧನ ಅವರು ಮಾಡಿರುವ ದ್ವಿಪಾತ್ರಗಳು ವಿಶೇಷ ಮತ್ತು ಅಪರೂಪ ಎನ್ನಿಸುವುದು ಸುಳ್ಳಲ್ಲ.ಹಾಗೂ ಇಂದಿಗೂ ಕೂಡ ಅಭಿಮಾನಿಗಳ ಮನಸಲ್ಲಿ ಹಾಗೆಯೇ ಆ ಪಾತ್ರಗಳು ಅಚ್ಚಳಿಯದೆ ಉಳಿದಿದೆ.ವಿಷ್ಣುವರ್ಧನ್ ಅವರು ೨೩ ಸಿನೆಮಾಗಳಲ್ಲಿ ತಮ್ಮ ದ್ವಿಪಾತ್ರ ಮೂಲಕ ರಾರಾಜಿಸಿದ್ದಾರೆ.
ಹಾಗೆ ನಂತರ ಬರುವ ಕಲಾವಿದ ಎಂದರು ಅದು ರಾಜಕುಮಾರ್ ಅವರು. ಅವರು ಕೂಡ ಹಲವಾರು ಸಿನೆಮಾಗಳಲ್ಲಿ ದ್ವಿಪಾತ್ರ ಮೂಲಕ ತಮ್ಮ ಅಭಿನಯದ ಮೂಲಕ ಜನಮಾನಸದಲ್ಲಿ ನೆಲೆಸಿದರು.
ಕನ್ನಡ ಚಿತ್ರರಂಗದಲ್ಲಿ ದ್ವಿಪಾತ್ರಗಳಲ್ಲಿ ನಟಿಸುವ ಜಮಾನ ಆರಂಭಿಸಿದ್ದೆ ರಾಜಕುಮಾರ್ ಅವರು ಎಂದರೆ ತಪ್ಪಾಗಲಾರದು. 1967 ರಲ್ಲಿ ತೆರೆಗೆ ಬಂದ “ರಾಜದುರ್ಗದ ರಹಸ್ಯ” ಎನ್ನುವ ಕನ್ನಡ ಸಿನಿಮಾ ಮೂಲಕ ಡಾ ರಾಜಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರಕ್ಕೆ ಕನ್ನಡದ ಪ್ರಖ್ಯಾತ ನರಸಿಂಹ ಮೂರ್ತಿ ಹಾಗೂ ದೊರೈ ಭಗವಾನ್ ಆಕ್ಷನ್ ಕಟ್ ಹೇಳಿದ್ದರು.ಈ ಚಿತ್ರದಲ್ಲಿ ಕನ್ನಡದ ನಟ ಸಾರ್ವಭೌಮ ರಾಜಕುಮಾರ್ ಅವರು ಒಬ್ಬ ಮುಗ್ಧ ಮತ್ತು ಒಬ್ಬ ಬುದ್ಧಿವಂತನ ಪಾತ್ರ ಮಾಡಿ ಸೈ ಎನ್ನಿಸಿಕೊಂಡಿದ್ದರು.
ನಂತರ ನಾನೊಬ್ಬ ಕಳ್ಳ ,ಕುಲ ಗೌರವ,ದಾರಿ ತಪ್ಪಿದ ಮಗ,ಬಬ್ರುವಾಹನ ಸಿನೆಮಾಗಳಲ್ಲಿ ಕನ್ನಡದ ಕಂಠೀರವ ಡಾ ರಾಜಕುಮಾರ್ ಅವರು ನಟಿಸಿದ್ದರು ಹಾಗೂ ಈ ಎಲ್ಲ ಚಿತ್ರಗಳು ಅತ್ಯಂತ ಯಶಸ್ವಿಯಾಗಿದ್ದವು. ಹಾಗೆಯೇ ಡಾ ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿರುವ ಎಲ್ಲ 23 ಕನ್ನಡ ಚಲನಚಿತ್ರಗಳು ಅತ್ಯಂತ ಯಶಸ್ವೀ ಚಿತ್ರಗಳು ಎಂದು ಕರೆಸಿಕೊಂಡವು.
ಚಲನಚಿತ್ರ ಮತ್ತು ಚಲನಚಿತ್ರಕ್ಕೆ ಸಂಭಂದಿಸಿದ ಎಲ್ಲ ಆಗು ಹೋಗುಗಳ ಕ್ಷಣ ಕ್ಷಣದ ಮಾಹಿತಿ ನೀಡುತ್ತೇವೆ.ಜೊತೆಗೆ ಎಲ್ಲ ಚಿತ್ರರಂಗದ ಆಶ್ಚರ್ಯಕರ ಮತ್ತು ಯಾರಿಗೂ ತಿಳಿದಿರದ ಕುತೂಹಲಕಾರಿ ವಿಷಯಗಳ ಮಾಹಿತಿ ನೀಡುತ್ತೇವೆ. ನಮ್ಮ ಚಾನೆಲ್ ಚಂದಾದಾರರಾಗಿ ಮತ್ತು ಅನಿಯಮಿತ ಆನಂದ ಮತ್ತು ಮಾಹಿತಿ ಪಡೆಯಿರಿ.
ಹೆಚ್ಚಿನ ವಿಡಿಯೋಗಳಿಗಾಗಿ (For More Videos )
ಯೂಟ್ಯೂಬ್ (Youtube ) :- https://www.youtube.com/@filmandmore2375
ಇನ್ಸ್ಟಾಗ್ರಾಮ್ ( Instagram ) :- https://instagram.com/filmandmore2021
ಫೇಸ್ಬುಕ್ ( Facebook ) :- http://facebook.com/filmandmore2021
ಧನ್ಯವಾದಗಳು
FilmAndMorE
We provide information on the movie and all the go-to moments for the movie. In addition we provide information on all the cinema surprises and interesting things that no one knows. Subscribe to our channel and get unlimited fun and information.
Thank you
FilmAndMorE